Govindraj Budagumpa
ಪ್ರೇರಣಾದಾಯಕ ಉಕ್ತಿಗಳು — Govindraj Budagumpa

ಪ್ರೇರಣಾದಾಯಕ ಉಕ್ತಿಗಳು

ಆದರ್ಶಗಳು — ಸಂಕಲನ (ಕನ್ನಡ). ಎಲ್ಲಾ ಉಕ್ತಿಗಳು ನಿಮ್ಮೊಂದಿಗೆ ಹಂಚಲು ಸಿದ್ಧವಾಗಿವೆ.

ವರ್ಣಗಳು: ಡಾರ್ಕ್‌ಗೋಲ್ಡ್ • ಸಿಲ್ವರ್ • ರೆಡ್
1
“ಸ್ನೇಹ, ಸೌಜನ್ಯದಿಂದ ಮನುಷ್ಯನನ್ನು ಗೆಲ್ಲಬಹುದೇ ಹೊರತು ಬರಿಯ ಶಕ್ತಿಯಿಂದಲ್ಲ.”
— ಅರಿಸ್ಟಾಟಲ್
2
“ತೆರೆದ ಮನಸ್ಸಿನಿಂದ ಎಲ್ಲವನ್ನೂ ಕೇಳಿಸಿಕೊಳ್ಳಬೇಕು, ನಮಗೆ ಅಗತ್ಯವೆನಿದ್ದನ್ನು ಮಾತ್ರ ಉಳಿಸಿಕೊಳ್ಳಬೇಕು.”
— ಜೆ.ಜೆ. ಗ್ರೀನ್
3
“ಯಾರನ್ನೇ ಆದರೂ ಪರೀಕ್ಷಿಸದೇ ನಂಬಬಾರದು, ನಂಬದ ಮೇಲೆ ಪರೀಕ್ಷಿಸಬಾರದು.”
— ತಿರುವಳ್ಳವರ್
4
“ನಿನ್ನೆಯ ನೆನಪಲ್ಲಿ ಇಂದು ಜೀವಿಸಿದರೂ ನಾಳಿನ ಭರವಸೆಗಾಗಿ ಪ್ರಶ್ನೆ ಕೇಳುವುದನ್ನು ನಿಲ್ಲಿಸಬಾರದು.”
— ಐನ್‌ಸ್ಟೀನ್
5
“ಬದುಕು ಎಂಬುದು ಹತ್ತಿಯಿದ್ದಂತೆ ಅದನ್ನು ಸಂತೋಷವೆಂಬ ಗಾಳಿಯಲ್ಲಿ ಊದಿ ಆದರೆ ಅದನ್ನು ದುಃಖವೆಂಬ ನೀರಿನಲ್ಲಿ ಅದ್ದಬೇಡಿ.”
— ಕುವೆಂಪು
6
“ನಾಳೆಯೇ ಸಾಯಬಹುದೆಂಬಂತೆ ಜೀವಿಸು, ಯಾವಾಗಲೂ ಜೀವಿಸುತ್ತೇನೆ ಎಂಬಂತೆ ಕಲಿಕೆಯನ್ನು ಮಾಡು.”
— ಮಹಾತ್ಮ ಗಾಂಧಿ
7
“ಶಕ್ತಿಯ ಜೀವನ ದೌರ್ಬಲ್ಯವೇ ಮರಣ.”
— ಸ್ವಾಮಿ ವಿವೇಕಾನಂದ
8
“ನಕಾರಾತ್ಮಕ ಆಲೋಚನೆಗಳು ಮನುಷ್ಯನನ್ನು ಬಲಹೀನಗೊಳಿಸುತ್ತದೆ.”
— ಸ್ವಾಮಿ ವಿವೇಕಾನಂದ
9
“ಮನುಷ್ಯ ಉರಿಯುವ ದೀಪದಂತೆ ಆಸಕ್ತಿ ಅದಕ್ಕೆ ಹಾಕುವ ಎಣ್ಣೆಯಂತೆ.”
— ಎ.ಪಿ.ಜೆ.ಅಬ್ದುಲ್ ಕಲಾಮ
10
“ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸಿ ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ.”
— ಸ್ವಾಮಿ ವಿವೇಕಾನಂದ
11
“ಸಮುದ್ರದ ದೃಶ್ಯ ಆನಂದಮಯ, ಆದರೆ ದಡದ ಮೇಲಿಂದ ನೋಡುವವರಿಗೇ ಹೊರತೂ ಮುಳುಗುವವರಿಗಲ್ಲ.”
— ವಿನೋಬಾ ಬಾವೆ
12
“ನಮ್ಮಲ್ಲಿ ನಮಗೆ ಶ್ರದ್ಧೆಯಿರಲಿ, ಸಕಲ ಶಕ್ತಿಯೂ ಅಡಗಿದೆ ನಮ್ಮಲ್ಲಿ — ಇದನ್ನರಿತು ಭಾವಿಸುತ್ತಾ ಆ ಶಕ್ತಿಯನ್ನು ಪ್ರಕಟಗೊಳಿಸಿಕೊಳ್ಳಿರಿ.”
— ಸ್ವಾಮಿ ವಿವೇಕಾನಂದ
13
“ಇತರರಿಗೆ ಕೇಡು ಬಗೆಯಬೇಡಿ, ಇತರರ ಮೇಲೆ ಕಾಲು ಇಡಬೇಡಿ. ನಮ್ಮ ಕೈಲಾದಷ್ಟು ಇತರರಿಗೆ ಹಿತವನ್ನೇ ಮಾಡಿರಿ, ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳಲ್ಲಿ ತೊಡಗಿ.”
— ಸ್ವಾಮಿ ವಿವೇಕಾನಂದ
14
“ಜಗತ್ತಿನಲ್ಲಿ ಮೂರು ವಸ್ತುಗಳನ್ನು ಮಡಚಿಡಲಾಗದು — ಸೂರ್ಯ, ಚಂದ್ರ ಮತ್ತು ಸತ್ಯ.”
— ಗೌತಮ ಬುದ್ಧ
15
“ಮನವೇ ದೇಗುಲ ಮತ್ತೆ ಇಳೆಯೇ ಗುಡಿಯೆಂದೆ, ಬಾಳನುಳಿದಿನ್ನಾವ ದೇವನಲ್ಲೆಂದೆ.”
— ವಿ.ಕೃ.ಗೋಕಾಕ್
16
“ಪ್ರೀತಿಸುವವರನ್ನು ಪಡೆಯುವುದು ಕಠಿಣ, ಅದಕ್ಕೂ ಕಠಿಣ ಕೆಡದಂತೆ ಪ್ರೀತಿಯ ಕಾಯ್ದುಕೊಂಡು ಹೋಗುವುದು.”
— ಸಿದ್ದಯ್ಯ ಪುರಾಣಿಕ
17
“ಪ್ರೇಮ ಬೆಂಕಿಯು ಎಲ್ಲವನ್ನೂ ಪವಿತ್ರವಾಗಿಸುತ್ತದೆ.”
— ಡಾ. ರಾಧಾಕೃಷ್ಣನ್
18
“ಬಡವರು ಹಸಿದಿರುವುದು ಅಕ್ಕರೆಗಾಗಿ. ರೊಟ್ಟಗಾಗಿ ಅಲ್ಲ.”
— ಮದರ್ ತೆರೆಸಾ
19
“ಕಳವು ಮಾಡಲೂ ಅವಕಾಶ ಸಿಗುವವರೆಲ್ಲರೂ ಅನಿವಾರ್ಯ ಪ್ರಾಮಾಣಿಕರು.”
— ಮುನಿಶ್ರೀ ತರುಣ್ ಸಾಗರ್
20
“ಶಕ್ತಿ ಇರುವುದು ಸಾಧು ಸ್ವಭಾವದಲ್ಲಿ ಹಾಗೂ ಚಾರಿತ್ರ ಶುದ್ಧಿಯಲ್ಲಿ.”
— ಸ್ವಾಮಿ ವಿವೇಕಾನಂದ
21
“ಪ್ರೇಮ ಇದ್ದಲ್ಲಿ ನಂಬಿಕೆ ಇರಲೇ ಬೇಕೆಂದಿಲ್ಲ ಆದರೆ ನಂಬಿಕೆ ಇದ್ದಲ್ಲ ಪ್ರೀತಿ ಇದ್ದೇ ಇರುವುದು.”
— ಸಂತ ಕಬೀರ
22
“ಗಾಳಿಯಂತೆ ನೀನು ಜೀವನದ ಎಲ್ಲಾ ಭಾಗಗಳಲ್ಲೂ ಪ್ರವೇಶ ಪಡೆ ಆದರೆ ಅಂಟಿಕೊಳ್ಳಬೇಡ.”
— ಅವಧೂತ ವೆಂಕಟಾಚಲ ಸದ್ಗುರು
23
“ತಿರಸ್ಕಾರಕ್ಕೆ ತಿರಸ್ಕಾರವೇ ಮದ್ದಲ್ಲ — ಪ್ರೀತಿಯೇ ದಿವ್ಯಾಷಧ.”
— ಗೌತಮ ಬುದ್ಧ
24
“ನಿಮ್ಮ ಹಾದಿಯಲ್ಲಿ ಮುಳ್ಳು ಚೆಲ್ಲಿದವರ ಹಾದಿಯಲ್ಲಿ ಹೂ ಚೆಲ್ಲಿ.”
— ಸ್ವಾಮಿ ವಿವೇಕಾನಂದ
25
“ಮಾತುಗಳು ಪರಸ್ಪರ ಬೇರ್ಪಡಿಸಲು ಇರುವುದಲ್ಲ, ಪರಸ್ಪರ ಸೇರಿಸಲು ಇರುವುದಾಗಿದೆ.”
— ಮಹಾತ್ಮ ಗಾಂಧೀಜಿ
© Govindraj Budagumpa — ಎಲ್ಲಾ ಹಕ್ಕುಗಳು ಸಂರಕ್ಷಿತ.